ಪ್ರತ್ಯಂಗಿರಾ ಹೋಮದ ಪ್ರಯೋಜನಗಳು
1. ಮಾನಸಿಕ ಶಾಂತಿ, ಸ್ಥಿರತೆ ಸಿಗುವುದು
ಪ್ರತ್ಯಂಗಿರಾ ದೇವಿಯು ಅತ್ಯಂತ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ದೇವತೆಯಾಗಿದ್ದು, ಅನೇಕರು ಈ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುತ್ತಾರೆ. ಪ್ರತ್ಯಂಗಿರಾ ದೇವಿಯನ್ನು ಪೂಜಿಸುವುದರಿಂದ ಮನಸ್ಸಿನ ಶಾಂತಿಯು ನೆಲೆಯಾಗುತ್ತದೆ. ಅಂದರೆ ದೇವಿಯ ಆರಾಧನೆಯಿಂದ ಮಾನಸಿಕ ಶಾಂತಿ ಪ್ರಾಪ್ತವಾಗುತ್ತದೆ. ಮತ್ತು ಇದರೊಂದಿಗೆ ಮಾನಸಿಕ ಸ್ಥಿರತೆಯನ್ನು ಪಡೆಯಲು ಸಹಕಾರಿಯಾಗಿದೆ.
2. ನಕಾರಾತ್ಮಕ ಶಕ್ತಿಗಳೇ ಇರದು
ಪ್ರತ್ಯಂಗಿರಾ ಹೋಮವು ಅತ್ಯಂತ ಶಕ್ತಿಶಾಲಿ ಹೋಮವಾಗಿದ್ದು, ಈ ಹೋಮವನ್ನು ಮಾಡುವುದರಿಂದ ಮಾತ್ರವಲ್ಲ. ಪ್ರತ್ಯಂಗಿರಾ ದೇವಿಯ ಆಶೀರ್ವಾದದಿಂದಲೂ ಕೂಡ ನಮ್ಮನ್ನು ಯಾವುದೇ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ನಮಗೆ ತೊಂದರೆಯನ್ನು ನೀಡುವುದಿಲ್ಲ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ ಆ ಸ್ಥಳದಲ್ಲಿ ಎಂದಿಗೂ ಕೂಡ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಪಡೆಯುವುದಿಲ್ಲ.
3. ದುರಾದೃಷ್ಟ ದೂರಾಗುವುದು
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳು ನಮ್ಮಿಂದ ದೂರಾಗುವುದು ಮಾತ್ರವಲ್ಲ. ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮೆಲ್ಲಾ ದುರಾದೃಷ್ಟಗಳು ದೂರಾಗುತ್ತದೆ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡಿರುತ್ತೇವೋ ಆ ಸ್ಥಳದಲ್ಲಿ ಎಂದಿಗೂ ದುರಾದೃಷ್ಟ ತಲೆದೂರುವುದಿಲ್ಲ.
4. ಆರೋಗ್ಯ ಪ್ರಾಪ್ತವಾಗುವುದು
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ಅನಾರೋಗ್ಯವು ದೂರಾಗಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ತೀವ್ರ ಅನಾರೋಗ್ಯವನ್ನು ಹೊಂದಿರುವವರು, ಅಷ್ಟೇ ಔಷಧಿಯನ್ನು ತೆಗೆದುಕೊಂಡರು ಅನಾರೋಗ್ಯ ದೂರಾಗದೇ ಇರುವವರು ಔಷಧಿಗಳನ್ನು ತೆಗೆದುಕೊಳ್ಳುವುದರೊಂದಿಗೆ ಈ ಹೋಮವನ್ನು ಕೂಡ ಮಾಡಬೇಕು. ಇದರಿಂದ ಎಂತಹುದ್ದೇ ಅನಾರೋಗ್ಯವಿದ್ದರೂ ದೂರಾಗುವುದು.
5. ಕೆಟ್ಟ ಕಣ್ಣಿನ ದೃಷ್ಟಿ ನಾಶವಾಗುವುದು
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮ ಮೇಲಿದ್ದ ದುಷ್ಟ ಕಣ್ಣಿನ ಪ್ರಭಾವವು ಕಡಿಮೆಯಾಗುವುದು. ಈ ಹೋಮವು ದೃಷ್ಟಿ ದೋಷವನ್ನು ದೂರಾಗಿಸುವುದು ಮತ್ತು ಇತರರು ನೀಡಿದ ಕೆಟ್ಟ ಶಾಪಗಳಿಂದ ನಮಗೆ ರಕ್ಷಣೆಯನ್ನು ನೀಡುವುದು. ಆದ್ದರಿಂದ ಈ ಹೋಮವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
6. ಮಾಟ – ಮಂತ್ರದ ಶಕ್ತಿ ಕುಗ್ಗುವುದು
ಮನೆಯಲ್ಲಿ ಪ್ರತಿನಿತ್ಯ ಸಾಧ್ಯವಾಗದಿದ್ದರೂ ಯಾವಾಗಲಾದರೂ ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ಮಾಟ – ಮಂತ್ರಗಳಂತಹ ದುಷ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಮಾಟ – ಮಂತ್ರಗಳ ಪಾಬಲ್ಯವು ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಾಶವಾಗುತ್ತದೆ.
7. ಸಂಪತ್ತು, ಸಮೃದ್ಧಿ ದೊರೆಯುವುದು
ಹೋಮ ನಡೆಯುತ್ತಿರುವ ಸ್ಥಳದಲ್ಲಿ ವಾಸಿಸುವ ಯಾವುದೇ ದುಷ್ಟಶಕ್ತಿಗಳು, ದೆವ್ವಗಳು ಮತ್ತು ಇತರ ಕೆಟ್ಟ ಶಕ್ತಿಗಳು ನಾಶವಾಗುವುದು.
ನಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಎಲ್ಲಾ ದುಷ್ಟ ಶಕ್ತಿಗಳಿಗೆ ನಮ್ಮನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಅಪಘಾತಗಳನ್ನು ಮತ್ತು ಕಾಯಿಲೆಗಳನ್ನು ತಡೆಗಟ್ಟಲು,
ಉತ್ತಮ ಆರೋಗ್ಯವನ್ನು, ಸಂಪತ್ತನ್ನು, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಈ ಹೋಮವನ್ನು ಮಾಡಬೇಕು.
ಈ ಹೋಮದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಕೆಂಪು ಮೆಣಸಿನಕಾಯಿ ಮತ್ತು ಮೆಣಸನ್ನು ಬಳಸಲಾಗುತ್ತದೆ. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಈ ಹೋಮವನ್ನು ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಈ ಹೋಮವನ್ನು ಒಬ್ಬಂಟಿಯಾಗಿ ಅಥವಾ ಕುಟುಂಬದೊಂದಿಗೆ ಮಾಡಬಹುದು. ಸಾಮಾನ್ಯವಾಗಿ, ಈ ಹೋಮವನ್ನು ಭಕ್ತರ ಮತ್ತೊಂದು ಗುಂಪಿನೊಂದಿಗೆ ಮಾಡಲಾಗುತ್ತದೆ. ಆದರೆ ಇದನ್ನು ನಿಮ್ಮ ಕುಟುಂಬಕ್ಕೂ ಪ್ರತ್ಯೇಕವಾಗಿ ಮಾಡಬಹುದು.
Lokanath –
Verry powerful God
admin –
Thank You For review
admin (verified owner) –
Very Power Full and effective Home